Cross references
ಆಗ ಕರ್ತನು ಮೋಶೆಗೆ--ಇಗೋ, ರೊಟ್ಟಿಯನ್ನು ನಿಮಗಾಗಿ ನಾನು ಆಕಾಶದಿಂದ ಸುರಿಸುತ್ತೇನೆ; ಅವರು ನನ್ನ ನ್ಯಾಯಪ್ರಮಾಣದ ಪ್ರಕಾರ ನಡೆದುಕೊಳ್ಳುವರೋ ಇಲ್ಲವೋ ಎಂದು ನಾನು ಅವರನ್ನು ಪರೀಕ್ಷಿಸುವ ಹಾಗೆ ಜನರು ಹೊರಗೆಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದ ದ್ದನ್ನು ಕೂಡಿಸಲಿ.
ಇಸ್ರಾಯೇಲ್ ಮಕ್ಕಳು ಅದನ್ನು ನೋಡಿದಾಗ ಅವರು ಒಬ್ಬರಿಗೊಬ್ಬರು--ಇದು ಮನ್ನಾ ಅಂದರು. ಯಾಕಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ--ಕರ್ತನು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ ಎಂದು ಹೇಳಿದನು.
ಇಸ್ರಾಯೇಲ್ ಮಕ್ಕಳು ವಾಸವಾಗಿರತಕ್ಕ ದೇಶಕ್ಕೆ ಬರುವ ವರೆಗೆ ನಾಲ್ವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಬರುವ ವರೆಗೂ ಅವರು ಮನ್ನವನ್ನು ತಿಂದರು.ಓಮೆರ್ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.
ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು.
ಅವರ ಹಸಿವೆಗೋಸ್ಕರ ಆಕಾಶದಿಂದ ರೊಟ್ಟಿಯನ್ನೂ ಕೊಟ್ಟಿ; ಅವರ ದಾಹಕ್ಕೋಸ್ಕರ ಬಂಡೆಯಿಂದ ನೀರನ್ನು ಬರಮಾಡಿ ನೀನು ಅವರಿಗೆ ಕೊಡಲು ಪ್ರಮಾಣ ಮಾಡಿದ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಹಾಗೆ ಅವರಿಗೆ ವಾಗ್ದಾನಮಾಡಿದಿ.
ಇದಲ್ಲದೆ ನೀನು ಅವರಿಗೆ ಬೋಧಿ ಸುವ ಹಾಗೆ ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ; ಅವರ ಬಾಯಿಗೆ ನಿನ್ನ ಮನ್ನವನ್ನು ಹಿಂದೆಗೆಯಲಿಲ್ಲ. ಅವರ ದಾಹಕ್ಕೆ ನೀರನ್ನು ಕೊಟ್ಟಿ.
ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು.
ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು.
ಆತನ ಶಿಷ್ಯರು ಹತ್ತಿದ ಒಂದೇ ದೋಣಿಯ ಹೊರತು ಮತ್ತೊಂದು ಅಲ್ಲಿ ಇರಲಿಲ್ಲವೆಂದೂ ಆತನ ಶಿಷ್ಯರು ಮಾತ್ರ ಹೋದರೆಂದೂ ಯೇಸು ತನ್ನ ಶಿಷ್ಯರ ಸಂಗಡ ದೋಣಿಯಲ್ಲಿ ಹೋಗಲಿಲ್ಲವೆಂದೂ ಮರು ದಿನ ಸಮುದ್ರದ ಆಚೆಯಲ್ಲಿ ನಿಂತಿದ್ದ ಜನರು ನೋಡಿ ದ್ದರು.