Home Bibles 1 ದಿನವೃತ್ತಾಂತ 9:11 · ಕನ್ನಡ ಬೈಬಲ್
1 ದಿನವೃತ್ತಾಂತ 9:11 · ಕನ್ನಡ ಬೈಬಲ್

ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;

Cross references

ಅಂಕೆಗಳ ಪುಸ್ತಕ 4:15

ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ.

ಅಂಕೆಗಳ ಪುಸ್ತಕ 4:28

ಗೇರ್ಷೋನನ ಕುಮಾರರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯು ಇದೇ: ಯಾಜಕ ನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವದು ಅವರಿಗೆ ಕೊಡಲ್ಪಟ್ಟ ಅಪ್ಪಣೆಯಾಗಿದೆ.

ಅಂಕೆಗಳ ಪುಸ್ತಕ 4:33

ಮೆರಾರೀಯ ಕುಮಾರರ ಕುಟುಂಬಗಳ ಸೇವೆಯೂ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೇ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು.

2 ಸಮುವೇಲ 8:17

ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜ ಕರಾಗಿದ್ದರು; ಸೆರಾಯನು ಮಂತ್ರಿಯಾಗಿದ್ದನು.ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.

2 ಅರಸುಗಳು 23:4

ಅರ ಸನು--ಬಾಳನಿಗೋಸ್ಕರವೂ ವಿಗ್ರಹದ ತೋಪುಗಳಿ ಗೋಸ್ಕರವೂ ಆಕಾಶದ ಸೈನ್ಯಕ್ಕೋಸ್ಕರವೂ ಮಾಡ ಲ್ಪಟ್ಟಿದ್ದ ಎಲ್ಲಾ ಪಾತ್ರೆಗಳನ್ನು ಕರ್ತನ ಆಲಯದಿಂದ ಹೊರಗೆ ತಕ್ಕೊಂಡು ಬರಬೇಕೆಂದು ಪ್ರಧಾನ ಯಾಜಕ ನಾದ ಹಿಲ್ಕೀಯನಿಗೂ ಎರಡನೇ ತರಗತಿಯ ಯಾಜಕ ರಿಗೂ ದ್ವಾರಪಾಲಕರಿಗೂ ಆಜ್ಞಾಪಿಸಿದನು ಮತ್ತು ಅವನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹೊಲಗಳಲ್ಲಿ ಸುಡಿಸಿ ಅವುಗಳ ಬೂದಿ ಯನ್ನು ಬೇತೇಲಿಗೆ ತರುವಂತೆ ಮಾಡಿದನು.

2 ಅರಸುಗಳು 25:18

ಕಾವಲುಗಾರರ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂರು ಮಂದಿ ದ್ವಾರಪಾಲಕರನ್ನೂ ಹಿಡಿದನು.

1 ದಿನವೃತ್ತಾಂತ 6:8

ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು;

1 ದಿನವೃತ್ತಾಂತ 6:12

ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು;

1 ದಿನವೃತ್ತಾಂತ 24:5

ಇವರು ಅವರ ಸಂಗಡ ಬೆರೆತಿದ್ದು ಚೀಟು ಗಳಿಂದ ವಿಭಾಗಿಸಲ್ಪಟ್ಟಿದ್ದರು; ಪರಿಶುದ್ಧ ಸ್ಥಾನದ ಪ್ರಧಾನರೂ ದೈವೀಕ ಕಾರ್ಯಗಳಲ್ಲಿ ಪ್ರಧಾನರೂ ಎಲ್ಲಾಜಾರನ ಕುಮಾರರಿಂದಲೂ ಈತಾಮಾರನ ಕುಮಾರರಿಂದಲೂ ಇದ್ದರು.

2 ದಿನವೃತ್ತಾಂತ 31:13

ಇದಲ್ಲದೆ ಅರಸನಾದ ಹಿಜ್ಕೀಯನ ಅಪ್ಪಣೆ ಯಿಂದಲೂ ದೇವರ ಆಲಯದ ಅಧಿಕಾರಿಯಾದ ಅಜರ್ಯನ ಅಪ್ಪಣೆಯಿಂದಲೂ ಯೆಹೀಯೇಲನೂ ಅಜಜ್ಯನೂ ನಹತನೂ ಅಸಾಹೇಲನೂ ಯೆರೀಮೋ ತನೂ, ಯೋಜಾಬಾದನೂ, ಎಲೀಯೇಲನೂ, ಇಸ್ಮ ಕ್ಯನೂ ಮಹತನೂ ಬೆನಾಯನೂ ಇವರು ಕೋನನ್ಯನ ಅವನ ಸಹೋದರನಾದ ಶಿಮ್ಮಿಯ ಕೈಕೆಳಗೆ ವಿಚಾರಣಾ ಕರ್ತರಾಗಿದ್ದರು.

ನೆಹೆಮ್ಯ 10:2

ಅಧಿಪತಿಯಾದ ನೆಹೆವಿಾಯನು, ಚಿದ್ಕೀಯನು, ಸೆರಾಯನು,

ನೆಹೆಮ್ಯ 11:11

ಅಹೀ ಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನಾದ ಸೆರಾಯನು ದೇವರ ಆಲ ಯದ ನಾಯಕನಾಗಿದ್ದನು.

ಯೆರೆಮಿಯ 20:1

ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನೂ ಯಾಜಕನಾದ ಚೆಫನ್ಯನನ್ನೂ

ಅಪೋಸ್ತಲರ ಕೃತ್ಯಗಳು 5:24

ಆಗ ಮಹಾಯಾಜಕನೂ ದೇವಾಲಯದ ಅಧಿಪತಿಯೂ ಪ್ರಧಾನಯಾಜಕರೂ ಇವುಗಳನ್ನು ಕೇಳಿ ಇದರಿಂದ ಏನು ಪರಿಣಾಮವಾದೀತು ಎಂದು ಅವರ ವಿಷಯದಲ್ಲಿ ಸಂದೇಹಪಟ್ಟರು.

ಅಪೋಸ್ತಲರ ಕೃತ್ಯಗಳು 5:26

ಆಗ ಅಧಿಪತಿಯು ಅಧಿಕಾರಿಗಳೊಂದಿಗೆ ಹೋಗಿ ಬಲಾತ್ಕಾರವೇನೂ ಮಾಡದೆ ಅವರನ್ನು ಕರತಂದನು; ಯಾಕಂದರೆ ಜನರು ತಮಗೆ ಕಲ್ಲೆಸೆದಾರು ಎಂದು ಅವರು ಭಯಪಟ್ಟಿದ್ದರು.

Interlinear

Choose Theme