Home Bibles 1 ದಿನವೃತ್ತಾಂತ 9:1 · ಕನ್ನಡ ಬೈಬಲ್
1 ದಿನವೃತ್ತಾಂತ 9:1 · ಕನ್ನಡ ಬೈಬಲ್

ಹೀಗೆಯೇ ಇಸ್ರಾಯೇಲಿನವರೆಲ್ಲರೂ ವಂಶಾವಳಿಗಳ ಪ್ರಕಾರ ಲೆಕ್ಕಿಸಲ್ಪಟ್ಟಿದ್ದರು. ಇಗೋ, ತಮ್ಮ ಅಪರಾಧಗಳ ನಿಮಿತ್ತ ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಇಸ್ರಾಯೇಲ್‌ ಯೆಹೂದಗಳ ಅರಸರ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

Cross references

1 ಅರಸುಗಳು 14:19

ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ ಅವನು ಯುದ್ಧ ಮಾಡಿದ್ದೂ ಆಳಿದ್ದೂ--ಇಗೋ, ಇವು ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕ ದಲ್ಲಿ ಬರೆಯಲ್ಪಟ್ಟಿವೆ.

2 ಅರಸುಗಳು 24:14

ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ.

2 ಅರಸುಗಳು 24:15

ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು.

2 ಅರಸುಗಳು 24:16

ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು.

1 ದಿನವೃತ್ತಾಂತ 5:25

ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್‌ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ.

2 ದಿನವೃತ್ತಾಂತ 33:11

ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು.

2 ದಿನವೃತ್ತಾಂತ 36:9

ಯೆಹೋಯಾಕೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು.

2 ದಿನವೃತ್ತಾಂತ 36:18

ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು.

ಎಜ್ರಾ 2:1

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಾಬೆಲಿಗೆ ಸೆರೆಯಾಗಿ ಹಿಡುಕೊಂಡು ಹೋದಂಥ ಯೆರೂಸಲೇಮಿಗೂ ಯೆಹೂದದಲ್ಲಿರುವ ತಮ್ಮ ತಮ್ಮ ಪಟ್ಟಣಗಳಿಗೂ ಸೆರೆಯಿಂದ ತಿರುಗಿದಂಥ

ಎಜ್ರಾ 2:59

ತೇಲ್ಮೆಲಹ ತೇಲ್ಹರ್ಷ ಕೆರೂಬದ್ದಾನ್‌ ಇಮ್ಮೇರ್‌ ಎಂಬುವ ಸ್ಥಳಗಳನ್ನು ಬಿಟ್ಟು ಬಂದವರಾರಂದರೆ, ದೆಲಾ ಯನ ಮಕ್ಕಳೂ ಟೋಬೀಯನ ಮಕ್ಕಳೂ ನೆಕೋದನ ಮಕ್ಕಳೂ--ಆರುನೂರ ಐವತ್ತೆರಡು ಮಂದಿಯು.

ಎಜ್ರಾ 2:62

ಇವರು ವಂಶಾವಳಿಯ ಪ್ರಕಾರ ಲೆಕ್ಕಿಸ ಲ್ಪಟ್ಟವರಲ್ಲಿ ತಮ್ಮ ವಂಶಾವಳಿಯನ್ನು ಹುಡುಕಿದರು. ಅದು ಸಿಕ್ಕದೆಹೋದರಿಂದ ಅವರು ಅಶುದ್ಧ ರೆಂದು ಯಾಜಕ ಉದ್ಯೋಗದಿಂದ ತೆಗೆಯಲ್ಪಟ್ಟರು.

ನೆಹೆಮ್ಯ 7:5

ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸಲ್ಪಡುವ ಹಾಗೆ ಪ್ರಮುಖರನ್ನೂ ಅಧಿಕಾರಸ್ಥರನ್ನೂ ಜನರನ್ನೂ ಕೂಡಿಸಿ ಕೊಳ್ಳಲು ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿ ಸಿದನು. ಆಗ ನಾನು ಮೊದಲಿನಲ್ಲಿ ಬಂದವರ ವಂಶಾ ವಳಿಯ ಪತ್ರಿಕೆಯನ್ನು ಕಂಡೆನು.

ನೆಹೆಮ್ಯ 7:64

ಇವರು ವಂಶಾವಳಿಯಾಗಿ ಬರೆಯಲ್ಪಟ್ಟವರಲ್ಲಿ ತಮ್ಮ ಹೆಸರು ಗಳನ್ನು ಹುಡುಕಿದರು; ಆದರೆ ಸಿಕ್ಕದೆ ಹೋದದ ರಿಂದ ಅವರು ಅಶುಚಿಯಾದವರೆಂದು ಎಣಿಸಲ್ಪಟ್ಟು ಯಾಜಕ ಉದ್ಯೋಗದಿಂದ ತೆಗೆದುಹಾಕಲ್ಪಟ್ಟರು.

ನೆಹೆಮ್ಯ 11:1

ಅಧಿಕಾರಿಗಳು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಇದಲ್ಲದೆ ಹತ್ತು ಮಂದಿ ಯಲ್ಲಿ ಒಬ್ಬನು ಪರಿಶುದ್ಧ ಪಟ್ಟಣವಾದ ಯೆರೂ ಸಲೇಮಿನಲ್ಲಿ ವಾಸವಾಗಿರುವದಕ್ಕೂ ಉಳಿದ ಒಂಭತ್ತು ಮಂದಿ ಇತರ ಪಟ್ಟಣಗಳಲ್ಲಿ ವಾಸವಾಗಿರುವದಕ್ಕೂ ಚೀಟುಗಳನ್ನು ಹಾಕಿದರು.

ಯೆಶಾಯ 3:2

ಇದಲ್ಲದೆ ಶೂರ, ಯುದ್ಧಭಟ, ನ್ಯಾಯಾಧಿಪತಿ, ಪ್ರವಾದಿ, ಪರಿಜ್ಞಾನಿ, ಪ್ರಾಚೀನ ಮನುಷ್ಯನು,

ಯೆರೆಮಿಯ 13:19

ನೀನು ಯೆಹೂದವನ್ನು ಪೂರ್ಣವಾಗಿ ತಳ್ಳಿ ದ್ದೀಯೋ? ನಿನ್ನ ಪ್ರಾಣವು ಚೀಯೋನನ್ನು ಅಸಹ್ಯಿ ಸುತ್ತದೋ? ನಮ್ಮನ್ನು ಯಾಕೆ ಹೊಡೆದಿದ್ದೀ? ನಮಗೆ ಗುಣವಾಗಲಿಲ್ಲ; ಸಮಾಧಾನವನ್ನು ನಿರೀಕ್ಷಿಸಿದೆವು, ಆದರೆ ಒಳ್ಳೇದೆನೂ ಇಲ್ಲ; ಗುಣವಾಗುವ ಕಾಲವನ್ನು ಸಹ ನಿರೀಕ್ಷಿಸಿದೆವು, ಆದರೆ ಇಗೋ, ಸಂಕಟ!

ಯೆರೆಮಿಯ 39:9

ಆಗ ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನು ಅವರಿಗೂ ಅವರ ಮನುಷ್ಯರಿಗೂ ಪ್ರಮಾಣಮಾಡಿ ಹೇಳಿದ್ದೇನಂದರೆ--ಕಸ್ದೀಯರಿಗೆ ಸೇವೆ ಮಾಡುವದಕ್ಕೆ ಭಯಪಡಬೇಡಿರಿ; ದೇಶದಲ್ಲಿ ವಾಸವಾಗಿದ್ದು ಬಾಬೆ ಲಿನ ಅರಸನಿಗೆ ಸೇವೆಮಾಡಿರಿ; ಆಗ ನಿಮಗೆ ಒಳ್ಳೇದಾ ಗುವದು.

ದಾನಿಯೇಲ 1:2

ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್‌ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.

ಮತ್ತಾಯ 1:1

ಯೇಸು ಕ್ರಿಸ್ತನ ವಂಶಾವಳಿಯ ಪುಸ್ತಕವು; ಆತನು ದಾವೀದನ ಮಗನು, ಆತನು ಅಬ್ರ ಹಾಮನ ಮಗನು.

ಲೂಕ 3:28

ಇವನು ಮೆಲ್ಖಿಯ ಮಗನು; ಇವನು ಅದ್ದಿಯ ಮಗನು; ಇವನು ಕೊಸಾಮನ ಮಗನು; ಇವನು ಎಲ್ಮದಾಮನ ಮಗನು; ಇವನು ಏರನ ಮಗನು;

Interlinear

Choose Theme