ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್‌ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು.
Cross references
ಅವರು ಫಿಲಿಷ್ಟಿ ಯರ ಅಧಿಪತಿಗಳೆಲ್ಲರನ್ನು ತಮ್ಮ ಬಳಿಗೆ ಕರೇಕಳುಹಿಸಿ ಅವರಿಗೆ--ಇಸ್ರಾಯೇಲ್ ದೇವರ ಮಂಜೂಷವನ್ನು ಏನು ಮಾಡೋಣ ಅಂದರು. ಅದಕ್ಕವರು--ಇಸ್ರಾ ಯೇಲ್ ದೇವರ ಮಂಜೂಷವು ಗತ್ ಊರಿಗೆ ಒಯ್ಯಲ್ಪಡಲಿ ಅಂದರು. ಅವರು ಇಸ್ರಾಯೇಲ್ ದೇವರ ಮಂಜೂಷವನ್ನು ಗತ್‌ಗೆ ಒಯ್ದರು.
ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ದೇವರ ಮಂಜೂಷವು ಎಕ್ರೋನಿಗೆ ಬಂದಾಗ ಆದದ್ದೇನಂದರೆ, ಎಕ್ರೋನ್ಯರು ನಮ್ಮನ್ನೂ ನಮ್ಮ ಜನರನ್ನೂ ಕೊಂದು ಹಾಕಬೇಕೆಂದು ಇಸ್ರಾಯೇಲ್ ದೇವರ ಮಂಜೂಷವನ್ನು ನಮ್ಮ ಬಳಿಗೆ ತಂದರೆಂದು ಕೂಗಿ ಹೇಳಿದರು.
ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು.
ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋ ದರನ ವಿಷಯವಾಗಿ ಆದರಿಸುವದಕ್ಕೆ ಬಂದಿದ್ದರು.