1 ದಿನವೃತ್ತಾಂತ 5:9 · ಕನ್ನಡ ಬೈಬಲ್
ಗಿಲ್ಯಾದಿನ ದೇಶದಲ್ಲಿ ಅವರ ದನಕುರಿಗಳು ಹೆಚ್ಚಾದದರಿಂದ ಅವನು ಮೂಡಣ ದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲುಗೊಂಡು ಅರಣ್ಯ ಪ್ರದೇಶದ ವರೆಗೂ ವಾಸ ವಾಗಿದ್ದನು.
Cross references
ಯೆಹೋಶುವ 22:8
ಅವ ರೊಂದಿಗೆ ಮಾತನಾಡಿ--ನೀವು ಬಹು ಆಸ್ತಿಯುಳ್ಳವ ರಾಗಿ ಪಶುಕುರಿ ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣವನ್ನು ಬಹು ಹೆಚ್ಚಾದ ವಸ್ತ್ರಗಳೊಂದಿಗೆ ಹಿಂತಿರುಗಿ ನಿಮ್ಮ ಡೇರೆಗಳಿಗೆ ಹೋಗಿ ನಿಮ್ಮ ಶತ್ರುಗಳ ಕೊಳ್ಳೆಯನ್ನು ನಿಮ್ಮ ಸಹೋದರರ ಸಂಗಡ ಹಂಚಿಕೊಳ್ಳಿರಿ ಅಂದನು.
ಯೆಹೋಶುವ 22:9
ಕರ್ತನು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ತಾವು ವಶಮಾಡಿಕೊಂಡ ತಮ್ಮ ಸ್ವಾಸ್ತ್ಯದ ದೇಶವಾಗಿರುವ ಗಿಲ್ಯಾದ್ ದೇಶಕ್ಕೆ ಹೋಗುವದಕ್ಕೆ ಕಾನಾನ್ ದೇಶದಲ್ಲಿರುವ ಶೀಲೋ ವನ್ನೂ ಇಸ್ರಾಯೇಲ್ ಮಕ್ಕಳನ್ನೂ ಬಿಟ್ಟು ತಿರಿಗಿ ಹೋದರು.