1 ದಿನವೃತ್ತಾಂತ 5:24 · ಕನ್ನಡ ಬೈಬಲ್
ಅವರ ಪಿತೃಗಳ ಮನೆ ಯಲ್ಲಿರುವ ಯಜಮಾನರು ಯಾರಂದರೆ--ಏಫೆರನು, ಇಷ್ಷೀಯು, ಎಲೀಯೇಲನು, ಅಜ್ರಿಯೇಲನು, ಯೆರೆ ವಿಾಯನು, ಹೋದವ್ಯನು, ಯೆಹ್ತಿಯೇಲನು. ಇವರು ಪರಾಕ್ರಮಶಾಲಿಗಳಾಗಿಯೂ ಹೆಸರುಗೊಂಡವರಾ ಗಿಯೂ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಇದ್ದರು.
Cross references
1 ದಿನವೃತ್ತಾಂತ 4:38
ಹೆಸರು ಹೆಸರಾಗಿ ಬರೆಯಲ್ಪಟ್ಟವರಾದ ಇವರು ತಮ್ಮ ಸಂತತಿಗಳಲ್ಲಿ ಪ್ರಭುಗಳಾಗಿದ್ದರು; ಅವರ ಪಿತೃಗಳ ಮನೆ ಬಹಳ ಅಭಿವೃದ್ಧಿಯಾಯಿತು.
1 ದಿನವೃತ್ತಾಂತ 12:21
ಇವರು ಗುಂಪಿಗೆ ವಿರೋಧವಾಗಿ ದಾವೀದನಿಗೆ ಸಹಾಯಕರಾಗಿದ್ದರು; ಅವರೆಲ್ಲರೂ ಬಲವುಳ್ಳ ಪರಾಕ್ರಮಶಾಲಿಗಳಾಗಿಯೂ ದಂಡಿನ ಪ್ರಧಾನರಾಗಿಯೂ ಇದ್ದರು.