1 ದಿನವೃತ್ತಾಂತ 4:42 · ಕನ್ನಡ ಬೈಬಲ್
ಇದಲ್ಲದೆ ಅವರಲ್ಲಿ ಸಿಮೆಯೋನನ ಕುಮಾರರಲ್ಲಿ ಐನೂರು ಮಂದಿ ಇಷ್ಷೀಯ ಕುಮಾರರಾದ ಪೆಲಟ್ಯ ನನ್ನೂ ನೆಗರ್ಯನನ್ನೂ ರೆಫಾಯನನ್ನೂ ಉಜ್ಜೀ ಯೇಲನನ್ನೂ ತಮ್ಮ ಅಧಿಪತಿಗಳಾಗಿ ಮಾಡಿಕೊಂಡು ಸೇಯಾರ್ ಪರ್ವತಕ್ಕೆ ಹೋಗಿ ತಪ್ಪಿಸಿಕೊಂಡು ಹೋದಉಳಿದ ಅಮಾಲೇಕ್ಯರನ್ನು ಹೊಡೆದು ಅಲ್ಲಿ ಇಂದಿನ ವರೆಗೂ ವಾಸವಾಗಿದ್ದಾರೆ.
Cross references
ಆದಿಕಾಂಡ 36:8
ಹೀಗೆ ಏಸಾವನು ಸೇಯಾರ್ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು.
ನಿರ್ಗಮಕಾಂಡ 17:14
ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು.
ದ್ವಿತೀಯೋಪದೇಶಕಾಂಡ 1:2
(ಹೋರೇಬಿನಿಂದ ಕಾದೇಶ್ ಬರ್ನೇಯಕ್ಕೆ ಸೇಯಾರ್ ಬೆಟ್ಟದ ಮಾರ್ಗವಾಗಿ ಹನ್ನೊಂದು ದಿವಸ ಪ್ರಯಾಣ).