Home Bibles 1 ದಿನವೃತ್ತಾಂತ 3:10 · ಕನ್ನಡ ಬೈಬಲ್
1 ದಿನವೃತ್ತಾಂತ 3:10 · ಕನ್ನಡ ಬೈಬಲ್

ಸೊಲೊಮೋನನ ಮಗನು ರೆಹಬ್ಬಾಮನು; ಇವನ ಮಗನು ಅಬೀಯನು; ಇವನ ಮಗನು ಆಸನು; ಇವನ ಮಗನು ಯೆಹೋಷಾಫಾಟನು.

Cross references

1 ಅರಸುಗಳು 11:43

ಸೊಲೊಮೋನನು ತನ್ನ ಪಿತೃ ಗಳ ಸಂಗಡ ಮಲಗಿದನು; ಅವನು ತನ್ನ ತಂದೆ ಯಾದ ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗನಾದ ರೆಹಬ್ಬಾಮನು ಅವನಿಗೆ ಬದಲಾಗಿ ಆಳಿದನು.

1 ಅರಸುಗಳು 14:31

ರೆಹಬ್ಬಾಮನು ತನ್ನ ಪಿತೃಗಳ ಸಂಗಡ ಮಲಗಿದನು. ದಾವೀದನ ಪಟ್ಟಣದಲ್ಲಿ ಅವನು ಹೂಣಿಡಲ್ಪಟ್ಟನು. ಅವನ ತಾಯಿ ಅಮ್ಮೋನ್ಯಳಾದ ನಯಮಾಳೆಂಬ ಹೆಸರುಳ್ಳವಳಾ ಗಿದ್ದಳು. ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಆಳಿದನು.

1 ಅರಸುಗಳು 15:6

ಅಬೀಯಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟವಲ್ಲವೋ?

1 ಅರಸುಗಳು 15:8

ಅಬೀಯಾಮನು ತನ್ನ ಪಿತೃಗಳ ಸಂಗಡ ಮಲಗಿ ದನು; ದಾವೀದನ ಪಟ್ಟಣದಲ್ಲಿ ಅವನನ್ನು ಹೂಣಿ ಟ್ಟರು. ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು.

1 ಅರಸುಗಳು 15:24

ಆಸನು ತನ್ನ ಪಿತೃಗಳ ಸಂಗಡ ಮಲಗಿದನು; ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ತನ್ನ ಪಿತೃಗಳ ಸಂಗಡ ಹೂಣಿಡಲ್ಪಟ್ಟನು. ಅವನಿಗೆ ಬದ ಲಾಗಿ ಅವನ ಮಗನಾದ ಯೆಹೋಷಾಫಾಟನು ಆಳಿದನು.

2 ದಿನವೃತ್ತಾಂತ 13:1

ಅರಸನಾದ ಯಾರೊಬ್ಬಾಮನ ಹದಿನೆಂಟನೇ ವರುಷದಲ್ಲಿ ಅಬೀಯನು ಯೆಹೂದದ ಮೇಲೆ ಆಳಲು ಆರಂಭಿಸಿದನು.

2 ದಿನವೃತ್ತಾಂತ 14:1

ಅಬೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನು ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು. ಅವನ ದಿವಸಗಳಲ್ಲಿ ಹತ್ತು ವರುಷ ದೇಶವು ಶಾಂತವಾಗಿತ್ತು,

2 ದಿನವೃತ್ತಾಂತ 17:1

ಅವನ ಮಗನಾದ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು;

ಮತ್ತಾಯ 1:7

ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು; ಅಬೀಯನಿಂದ ಆಸನು ಹುಟ್ಟಿದನು;

Interlinear

Choose Theme