ಚೆರೂಯಳ ಮಗನಾದ ಯೋವಾಬನು ಎಣಿಸಲು ಆರಂಭಿ ಸಿದನು; ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ರೌದ್ರವು ಬಂದದ್ದರಿಂದ ಅವನು ಪೂರ್ತಿ ಗೊಳಿಸಲಿಲ್ಲ; ಆ ಲೆಕ್ಕವು ಅರಸನಾದ ದಾವೀದನ ವೃತಾಂತಗಳ ಪುಸ್ತಕದಲ್ಲಿ ಸೇರಲಿಲ್ಲ.
Cross references
ಕರ್ತನ ಕೋಪವು ತಿರಿಗಿ ಇಸ್ರಾಯೇಲಿಗೆ ವಿರೋಧವಾಗಿ ಉರಿಯಿತು; ಆಗ ಇಸ್ರಾ ಯೇಲನ್ನೂ ಯೆಹೂದವನ್ನೂ ಲೆಕ್ಕಿಸಲು ಹೋಗೆಂದು ಆತನು ದಾವೀದನನ್ನು ಪ್ರೇರೇಪಿಸಿದನು.
ಹಾಗೆಯೇ ಕರ್ತನು ಉದಯ ಕಾಲದಿಂದ ನೇಮಿಸಿದ ಕಾಲದ ವರೆಗೂ ಇಸ್ರಾಯೇಲಿನ ಮೇಲೆ ವ್ಯಾಧಿಯನ್ನು ಕಳುಹಿಸಿದನು. ಆದದರಿಂದ ದಾನಿ ಬನಿಂದ ಬೆರ್ಷೆಬದ ವರೆಗೂ ಇರುವ ಜನರಲ್ಲಿ ಎಪ್ಪತ್ತುಸಾವಿರ ಜನರು ಸತ್ತುಹೋದರು.
ಸೈತಾನನು ಇಸ್ರಾಯೇಲಿಗೆ ವಿರೋಧವಾಗಿ ಎದ್ದು ಇಸ್ರಾಯೇಲ್ಯರನ್ನು ಲೆಕ್ಕಿಸಲು ದಾವೀದನನ್ನು ಪ್ರೇರೇಪಿಸಿದನು.
ಕತ್ತಿಯನ್ನು ಹಿಡಿಯುವ ಸಮಸ್ತ ಇಸ್ರಾಯೇಲ್ಯರು ಹನ್ನೊಂದು ಲಕ್ಷಜನರಾಗಿದ್ದರು; ಕತ್ತಿಯನ್ನು ಹಿಡಿಯುವ ಯೆಹೂದದ ಜನರು ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಜನರಾಗಿದ್ದರು.
ಆದರೆ ಲೇವಿಯರನ್ನೂ ಬೆನ್ಯಾವಿಾನ್ಯ ರನ್ನೂ ಅವರಲ್ಲಿ ಎಣಿಸಲಿಲ್ಲ; ಯಾಕಂದರೆ ಅರಸನ ಮಾತು ಯೋವಾಬನಿಗೆ ಅಸಹ್ಯಕರವಾಗಿತ್ತು.