ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ ಚಾದೋಕನು ಅಹಿಮೇಲೆಕನು ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ ಆರೋನನ ಕುಮಾರರಾದ ತಮ್ಮ ಸಹೋದರರಿಗೆದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಚಿಕ್ಕ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.
Cross references
ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು.
ಇವರು ಅವರ ಸಂಗಡ ಬೆರೆತಿದ್ದು ಚೀಟು ಗಳಿಂದ ವಿಭಾಗಿಸಲ್ಪಟ್ಟಿದ್ದರು; ಪರಿಶುದ್ಧ ಸ್ಥಾನದ ಪ್ರಧಾನರೂ ದೈವೀಕ ಕಾರ್ಯಗಳಲ್ಲಿ ಪ್ರಧಾನರೂ ಎಲ್ಲಾಜಾರನ ಕುಮಾರರಿಂದಲೂ ಈತಾಮಾರನ ಕುಮಾರರಿಂದಲೂ ಇದ್ದರು.
ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.
ಅವರು ಕಿರಿ ಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಲು ಬಾಗಲುಗಳಿಗೂ ಚೀಟುಗಳನ್ನು ಹಾಕಿದರು.
ಸೊಲೊಮೋ ನನು ಸಮಸ್ತ ಇಸ್ರಾಯೇಲ್ಯರೊಡನೆಯೂ ಸಹಸ್ರ ಶತಾಧಿಪತಿಗಳೊಡನೆಯೂ ನ್ಯಾಯಾಧಿಪತಿಗಳೊ ಡನೆಯೂ ಪ್ರಧಾನ ಪಿತೃಗಳೊಡನೆಯೂ ಇಸ್ರಾಯೇಲಿನಲ್ಲಿರುವ ಸಮಸ್ತ ಪ್ರಭುಗಳೊಡನೆಯೂ ಮಾತ ನಾಡಿದನು.
ಇವನ ತರುವಾಯ ಯಾಜಕರ ಪಟ್ಟಣಗಳಲ್ಲಿ ತಮ್ಮ ಸಹೋದರರಿಗೆ ಸರತಿ ಸರತಿಯಾಗಿ ಹಿರಿಯರಿಗೂ ಕಿರಿಯರಿಗೂ ಪಾಲು ಹಂಚುವದಕ್ಕೆ ಎದೆನನೂ ವಿಾನ್ಯವಿಾನನೂ ಯೇಷೂವನೂ ಶೆಮಾ ಯನೂ ಅಮರ್ಯನೂ ಶೆಕನ್ಯನೂ ಇದ್ದರು.