ದಾವೀದನು ಇಸ್ರಾಯೇಲಿನ ದೇಶದಲ್ಲಿರುವ ಪರ ದೇಶಸ್ಥರನ್ನು ಕೂಡಿಸಲು ಹೇಳಿ ದೇವರ ಮನೆಯನ್ನು ಕಟ್ಟಿಸುವದಕ್ಕೆ ಕೆತ್ತನೆ ಕಲ್ಲುಗಳನ್ನು ಕಡಿಯುವ ಹಾಗೆ ಕುಟಿಗರನ್ನು ನೇಮಿಸಿದನು.
Cross references
ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು.
ಅರಸನು ಆಜ್ಞಾಪಿಸಿದ್ದರಿಂದ ದೊಡ್ಡ ಕಲ್ಲುಗಳನ್ನೂ ಬೆಲೆಯುಳ್ಳ ಕಲ್ಲುಗಳನ್ನೂ ಮನೆಯ ಅಸ್ತಿವಾರವನ್ನು ಹಾಕಲು ಕಟ್ಟಿದ ಕಲ್ಲುಗಳನ್ನೂ ತಂದರು.ಹೀಗೆಯೇ ಸೊಲೊಮೋನನ ಶಿಲ್ಪಕಾರರೂ ಹಿರಾಮನ ಶಿಲ್ಪಕಾ ರರೂ ಗಿಬ್ಲಿಯರೂ ಅವುಗಳನ್ನು ಕಡಿದು ಮನೆಯನ್ನು ಕಟ್ಟುವದಕ್ಕೆ ಕಲ್ಲುಗಳನ್ನೂ ಮರಗಳನ್ನೂ ಸಿದ್ಧ ಮಾಡಿದರು.
ಮನೆಯನ್ನು ಕಟ್ಟುತ್ತಿರುವಾಗ ಅದು ಸಿದ್ಧವಾಗಿ ತರಲ್ಪಟ್ಟ ಕಲ್ಲುಗಳಿಂದ ಕಟ್ಟಲ್ಪಟ್ಟಿತು. ಆದದರಿಂದ ಮನೆಯನ್ನು ಕಟ್ಟುತ್ತಿರುವಾಗ ಅದರಲ್ಲಿ ಸುತ್ತಿಗೆ, ಕೊಡಲಿ, ಕಬ್ಬಿಣದ ಯಾವ ಸಾಮಾನಿನ ಶಬ್ದ ಕೇಳಲ್ಪಟ್ಟಿದ್ದಿಲ್ಲ.
ಇವೆಲ್ಲಾ ಒಳಗೂ ಹೊರಗೂ ಅಸ್ತಿವಾರ ಗಳು ಮೊದಲುಗೊಂಡು ಕಬೋದದ ವರೆಗೂ ಹೊರ ಗಿರುವ ದೊಡ್ಡ ಅಂಗಳದ ಮಟ್ಟಿಗೂ ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲ್ಪಟ್ಟ ಕೆತ್ತಿದ ಬೆಲೆಯುಳ್ಳ ಕಲ್ಲು ಗಳಾಗಿದ್ದವು.
ಇಸ್ರಾಯೇಲಿನ ಮಕ್ಕಳಲ್ಲದೆ ಅಮೋರ್ಯರು ಹಿತ್ತೀಯರು ಪೆರಿಜ್ಜೀಯರು ಹಿವ್ವೀಯರು ಯೆಬೂಸಿ ಯರು ಇವರಲ್ಲಿ ಉಳಿದ ಸಮಸ್ತ ಜನರೂ
ಇದ ಲ್ಲದೆ ಕರ್ತನ ಮನೆಯ ಒಡಕುಗಳನ್ನು ದುರಸ್ತು ಮಾಡುವದಕ್ಕೆ ಮರವನ್ನೂ ಕೆತ್ತಿದಕಲ್ಲುಗಳನ್ನೂ ತೆಗೆದು ಕೊಳ್ಳುವದಕ್ಕೂ ಮನೆ ದುರಸ್ತು ಮಾಡಲು ಬೇಕಾದ ಎಲ್ಲಾ ವೆಚ್ಚಕ್ಕಾಗಿ ಕೊಟ್ಟರು.
ಮನೆ ದುರಸ್ತುಮಾಡುವ ಹಾಗೆ ಕರ್ತನ ಮನೆಯಲ್ಲಿ ಕೆಲಸ ಮಾಡುವವರಾದ ಬಡಿಗೆಯವ ರಿಗೂ ಶಿಲ್ಪಿಗಾರರಿಗೂ ಕಲ್ಲು ಕೆಲಸದವರಿಗೂ ಕೊಟ್ಟು ಮನೆಯನ್ನು ದುರಸ್ತು ಮಾಡಲು ಮರಗಳನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವದಕ್ಕೆ ಕೊಡಲಿ.
ತೂರಿನ ಅರಸನಾದ ಹೀರಾಮನು ದಾವೀದನಿಗೆ ಮನೆಯನ್ನು ಕಟ್ಟುವ ನಿಮಿತ್ತ ದೇವದಾರು ಮರಗಳನ್ನೂ ಕಲ್ಲು ಕುಟಿಗರನ್ನೂ ಬಡಗಿ ಯರನ್ನೂ ಅವನ ಬಳಿಗೆ ಕಳುಹಿಸಿದನು.
ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನಂದರೆ -- ದೇವರು ಒಬ್ಬನನ್ನೇ ಆದುಕೊಂಡ ನನ್ನ ಮಗನಾದ ಸೊಲೊ ಮೋನನು ಚಿಕ್ಕವನಾಗಿಯೂ ಮೃದುವಾಗಿಯೂ ಇದ್ದಾನೆ. ಆದರೆ ಕೆಲಸವು ದೊಡ್ಡದು; ಈ ಅರಮನೆ ಯು ಮನುಷ್ಯರಿಗೋಸ್ಕರವಲ್ಲ, ಕರ್ತನಾದ ದೇವರಿ ಗೋಸ್ಕರವೇ.
ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ತೆಪ್ಪಗಳಲ್ಲಿ ಸಮುದ್ರದ ಮಾರ್ಗವಾಗಿ ಯೊಪ್ಪಕ್ಕೆ ತಕ್ಕೊಂಡು ಬರುತ್ತೇವೆ; ನೀನು ಅವುಗ ಳನ್ನು ಯೆರೂಸಲೇಮಿಗೆ ಒಯ್ಯಬಹುದು.
ಸೊಲೊ ಮೋನನು ಇಸ್ರಾಯೇಲ್ ದೇಶದಲ್ಲಿದ್ದ ಅನ್ಯದೇಶ ಸ್ಥರನ್ನು ಲೆಕ್ಕಿಸಿದನು; ತನ್ನ ತಂದೆಯಾದ ದಾವೀದನು ಅವರನ್ನು ಲೆಕ್ಕಿಸಿದ ತರುವಾಯ ತಾನೂ ಲೆಕ್ಕಿಸಿದನು; ಅವರು ಲಕ್ಷದ ಐವತ್ತಮೂರು ಸಾವಿರದ ಆರುನೂರು ಮಂದಿ ಕಂಡುಬಂದರು.ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಹೊರೆಹೊರುವದಕ್ಕೂ ಎಂಭತ್ತು ಸಾವಿರ ಮಂದಿಯನ್ನು ಬೆಟ್ಟದಲ್ಲಿ ಕಲ್ಲು ಕಡಿಯುವ ದಕ್ಕೂ ಮೂರು ಸಾವಿರದ ಆರು ನೂರು ಮಂದಿ ಯನ್ನು ಕೆಲಸದವರ ಮೇಲೆ ಮೇಲ್ವಿಚಾರಣೆಗಾಗಿಯೂ ಇರಿಸಿದನು.
ಸೊಲೊಮೋನನು ಇಸ್ರಾಯೇಲಿನ ಮಕ್ಕಳಲ್ಲದ ಹಿತ್ತಿಯರೂ ಅಮೋರಿಯರೂ ಪೆರಜೀಯರೂ ಹಿವ್ವಿಯರೂ ಯೆಬೂಸಿಯರೂ ಇವರಲ್ಲಿ ಉಳಿದ ಸಮಸ್ತ ಜನರೂ
ಇದಲ್ಲದೆ ಅವರು ಕಲ್ಲುಕುಟಿಕರಿಗೂ ಬಡಗಿಯ ವರಿಗೂ ಹಣವನ್ನು ಕೊಟ್ಟು ಪಾರಸಿಯ ಅರಸನಾದ ಕೋರೆಷನಿಂದ ಹೊಂದಿದ ಅಪ್ಪಣೆಯ ಪ್ರಕಾರ ಲೆಬನೋನಿನಿಂದ ಯೊಪ್ಪದ ಸಮುದ್ರದ ಮಟ್ಟಿಗೂ ದೇವದಾರು ಮರಗಳನ್ನು ತಕ್ಕೊಂಡು ಬರಲು ಚೀದೋ ನ್ಯರಿಗೂ ತೂರ್ಯರಿಗೂ ಅನ್ನ ಪಾನಗಳನ್ನೂ ಎಣ್ಣೆ ಯನ್ನೂ ಕೊಟ್ಟನು.
ಇದಲ್ಲದೆ ಅನ್ಯರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು; ಪರರ ಪುತ್ರರು ನಿಮಗೆ ನೇಗಿಲು ಹೂಡುವವರೂ ದ್ರಾಕ್ಷೇತೋಟ ಕಾಯುವವರೂ ಆಗಿರುವರು.
ಇದಲ್ಲದೆ ನೀವು ಆ ಕಾಲದಲ್ಲಿ ಕ್ರಿಸ್ತನಿಲ್ಲದವರು ಇಸ್ರಾಯೇಲಿನ ಬಾಧ್ಯತೆಯಲ್ಲಿ ಹಕ್ಕಿಲ್ಲದವರೂ ಪರಕೀಯರು ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಿಗೆ ಅನ್ಯರೂ ನಿರೀಕ್ಷೆ ಯಿಲ್ಲದವರೂ ಈ ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ.
ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ಪರಿಶುದ್ಧರೊಂದಿಗೆ ಒಂದೇ ಪಟ್ಟಣದವರೂ ದೇವರ ಮನೆಯವರೂ ಆಗಿದ್ದೀರಿ.