Home Bibles 1 ದಿನವೃತ್ತಾಂತ 21:10 · ಕನ್ನಡ ಬೈಬಲ್
1 ದಿನವೃತ್ತಾಂತ 21:10 · ಕನ್ನಡ ಬೈಬಲ್

ನೀನು ದಾವೀದನ ಬಳಿಗೆ ಹೋಗಿ ಅವನ ಸಂಗಡ ಮಾತ ನಾಡಿ--ಕರ್ತನು ಹೀಗೆ ಹೇಳುತ್ತಾನೆ, ಮೂರು ಕಾರ್ಯ ಗಳನ್ನು ನಿನ್ನ ಮುಂದೆ ಇಡುತ್ತೇನೆ; ನಾನು ನಿನಗೆ ಮಾಡುವ ಹಾಗೆ ಅವುಗಳಲ್ಲಿ ಒಂದನ್ನು ಆರಿಸಿಕೋ ಎಂದು ಹೇಳು.

Cross references

ಅಂಕೆಗಳ ಪುಸ್ತಕ 20:12

ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್‌ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.

ಯೆಹೋಶುವ 24:15

ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು.

2 ಸಮುವೇಲ 12:10

ಈಗ ನೀನು ನನ್ನನ್ನು ತಿರಸ್ಕರಿಸಿ ಹಿತ್ತಿಯ ನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿ ಯಾಗಿ ತೆಗೆದುಕೊಂಡದ್ದರಿಂದ ಕತ್ತಿಯು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾನೆ.

1 ಅರಸುಗಳು 13:21

ಅವನು ಯೆಹೂದದಿಂದ ಬಂದ ದೇವರ ಮನುಷ್ಯನಿಗೆ--ನೀನು ಕರ್ತನ ಮಾತಿಗೆ ತಿರುಗಿಬಿದ್ದು ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾ ಪಿಸಿದ ಆಜ್ಞೆಯನ್ನು ಕೈಕೊಳ್ಳದೆ ಹಿಂದಕ್ಕೆ ಬಂದುರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ ಎಂದು ಕರ್ತನು ನಿನಗೆ ಹೇಳಿದ ಸ್ಥಳದಲ್ಲಿ

ಸಾಮೇತಿಗಳು 1:29

ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ

ಸಾಮೇತಿಗಳು 3:12

ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು.

ಪ್ರಕಟನೆ 3:19

ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.

Interlinear

Choose Theme