Home Bibles ☰ Books 1 ದಿನವೃತ್ತಾಂತ 2:17 · ಕನ್ನಡ ಬೈಬಲ್
1 ದಿನವೃತ್ತಾಂತ 2:17 · ಕನ್ನಡ ಬೈಬಲ್

ಅಬೀಗೈಲಳು ಅಮಾಸನನ್ನು ಹೆತ್ತಳು. ಅಮಾಸನ ತಂದೆಯು ಇಷ್ಮಾಯೇಲ್ಯನಾದ ಯೇತೆರನು.

Cross references

2 ಸಮುವೇಲ 17:25

ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯನ್ನಾಗಿ ನೇಮಿಸಿದನು. ನಾಹಾಷನಿಗೆ ಮಗಳಾದ ಅಬೀಗೈಲಳ ಬಳಿಗೆ ಪ್ರವೇಶಿಸಿದ ಇಸ್ರಾಯೇಲ್ಯನಾದ ಇತ್ರನೆಂಬ ಹೆಸರುಳ್ಳ ಈ ಅಮಾಸನು ಒಬ್ಬ ಮಗನಾಗಿದ್ದನು. ಅಬೀಗೈಲಳು ಯೋವಾಬನ ತಾಯಿಯಾದ ಚೆರೂಯಳಿಗೆ ಸಹೋದರಿಯಾಗಿದ್ದಳು.

2 ಸಮುವೇಲ 19:13

ಇದಲ್ಲದೆ ನೀವು ಅಮಾಸನಿಗೆ--ನೀನು ನನ್ನ ಎಲುಬೂ ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ ದೇವರು ನನಗೆ ಹಾಗೆಯೇ ಮಾಡಲಿ ಎಂದು ಹೇಳಿರಿ ಅಂದನು.

2 ಸಮುವೇಲ 20:4

ಅರಸನು ಅಮಾಸನಿಗೆ--ನೀನು ಮೂರು ದಿವಸ ಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ಇಲ್ಲಿ ಇರು ಅಂದನು.

1 ಅರಸುಗಳು 2:5

ಇದಲ್ಲದೆ ಚೆರೂಯಳ ಮಗನಾದ ಯೋವಾಬನು ನನಗೂ ಇಸ್ರಾಯೇಲಿನ ಸೈನ್ಯಗಳಿಗೆ ಇಬ್ಬರು ಅಧಿಪತಿಗಳಾದ ನೇರನ ಮಗನಾದ ಅಬ್ನೇರ ನಿಗೂ ಯೇತ್ರನ ಮಗನಾದ ಅಮಾಸನಿಗೂ ಏನು ಮಾಡಿದನೋ ನೀನು ಬಲ್ಲೆ. ಯಾಕಂದರೆ ಅವನು ಅವರನ್ನು ಕೊಂದು ಸಮಾಧಾನದಲ್ಲಿ ಯುದ್ಧದ ರಕ್ತ ವನ್ನು ಚೆಲ್ಲಿ ತನ್ನ ನಡುವಿನಲ್ಲಿರುವ ನಡುಕಟ್ಟಿನ ಮೇಲೆಯೂ ತನ್ನ ಪಾದಗಳಲ್ಲಿರುವ ಪಾದರಕ್ಷೆಗಳ ಮೇಲೆಯೂ ಯುದ್ಧದ ರಕ್ತವನ್ನು ಹಚ್ಚಿಕೊಂಡನು.

1 ಅರಸುಗಳು 2:32

ಆಗ ಕರ್ತನು ಅವನ ತಲೆಯ ಮೇಲೆ ಅವನ ರಕ್ತಾಪರಾಧ ವನ್ನು ಬರಮಾಡುವನು. ನನ್ನ ತಂದೆಯಾದ ದಾವೀ ದನು ತಿಳಿಯದಿರುವಾಗ ಅವನು ತನಗಿಂತ ನೀತಿಯುಳ್ಳ ಉತ್ತಮರಾದ ಇಬ್ಬರ ಮೇಲೆ ಬಿದ್ದು ಅವರನ್ನು ಕತ್ತಿ ಯಿಂದ ಕೊಂದನು. ಅವರು ಯಾರಂದರೆ, ಇಸ್ರಾ ಯೇಲಿನ ಸೈನ್ಯಕ್ಕೆ ಅಧಿಪತಿಯಾಗಿದ್ದ ನೇರನ ಮಗನಾದ ಅಬ್ನೇರನೂ ಯೆಹೂದ ಸೈನ್ಯಕ್ಕೆ ಅಧಿಪತಿಯಾಗಿದ್ದ ಯೆತೆರನ ಮಗನಾದ ಅಮಾಸನೂ.

Interlinear

Choose Theme