Home Bibles 1 ದಿನವೃತ್ತಾಂತ 19:2 · ಕನ್ನಡ ಬೈಬಲ್
1 ದಿನವೃತ್ತಾಂತ 19:2 · ಕನ್ನಡ ಬೈಬಲ್

ಆಗ ದಾವೀದನು--ಹಾನೂನನ ತಂದೆಯಾದ ನಾಹಾಷನು ನನಗೆ ಕೃಪೆ ತೋರಿಸಿದ್ದರಿಂದ ಅವನ ಮಗನಾದ ಹಾನೂನನಿಗೆ ನಾನು ಕೃಪೆ ತೋರಿಸುವೆನು ಅಂದನು. ದಾವೀದನು ಅವನ ತಂದೆಯನ್ನು ಕುರಿತು ಅವನಿಗೆ ಆದರಣೆ ಕೊಡಲು ಸೇವಕರನ್ನು ಕಳುಹಿ ಸಿದನು. ಹೀಗೆಯೇ ದಾವೀದನ ಸೇವಕರು ಅವನಿಗೆ ಆದರಣೆ ಕೊಡಲು ಅಮ್ಮೋನನ ಮಕ್ಕಳ ದೇಶಕ್ಕೆ ಹಾನೂನನ ಬಳಿಗೆ ಬಂದರು.

Cross references

ಆದಿಕಾಂಡ 19:37

ಮೊದಲು ಹುಟ್ಟಿದವಳು ಮಗನನ್ನು ಹೆತ್ತು ಅವನಿಗೆ ಮೋವಾಬ್‌ ಎಂದು ಹೆಸರಿಟ್ಟಳು. ಇಂದಿನ ವರೆಗೂ ಮೋವಾಬ್ಯರಿಗೆ ಇವನೇ ತಂದೆ.ಚಿಕ್ಕವಳು ಸಹ ಮಗನನ್ನು ಹೆತ್ತು ಅವನಿಗೆ ಬೆನಮ್ಮಿ ಎಂದು ಹೆಸರಿಟ್ಟಳು. ಇಂದಿನ ವರೆಗೂ ಅಮ್ಮೋನನ ಮಕ್ಕಳಿಗೆ ಇವನೇ ತಂದೆ.

ದ್ವಿತೀಯೋಪದೇಶಕಾಂಡ 23:3

ಅಮ್ಮೋನ್ಯನು ಇಲ್ಲವೆ ಮೋವಾಬ್ಯನು ಕರ್ತನ ಸಭೆಗೆ ಸೇರಬಾರದು. ಹತ್ತನೇ ತಲಾಂತರವಾದರೂ ಅವರು ಎಂದಿಗೂ ಕರ್ತನ ಸಭೆಯಲ್ಲಿ ಸೇರಬಾರದು.

1 ಸಮುವೇಲ 30:26

ಆದರೆ ದಾವೀದನು ಚಿಕ್ಲಗಿಗೆ ಬಂದಾಗ ಅವನು ಕೊಳ್ಳೆಮಾಡಿದವುಗಳಲ್ಲಿ ತನ್ನ ಸ್ನೇಹಿತರಾದ ಯೆಹೂ ದದ ಹಿರಿಯರಿಗೆ ಕೆಲವನ್ನು ಕಳುಹಿಸಿ--ಇಗೋ, ಕರ್ತನ ಶತ್ರುಗಳ ಕೊಳ್ಳೆಯಲ್ಲಿ ಇವು ನಿಮಗೆ ಬಹು ಮಾನವೆಂದು ಹೇಳಿದನು.

2 ಸಮುವೇಲ 9:1

ದಾವೀದನು--ಸೌಲನ ಮನೆಯವರಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ ಎಂದು ಕೇಳಿದನು.

2 ಸಮುವೇಲ 9:7

ದಾವೀ ದನು--ಮೆಫೀಬೋಶೆತನೇ ಅಂದನು. ಅವನು--ಇಗೋ, ನಿನ್ನ ದಾಸನು ಅಂದನು. ಆಗ ದಾವೀದನು ಅವನಿಗೆ -- ಭಯಪಡಬೇಡ, ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು. ನಿನ್ನ ತಂದೆಯಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರಿಗಿ ಕೊಡುವೆನು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವಿ ಅಂದನು.

2 ಅರಸುಗಳು 4:13

ಅವನು ಗೇಹ ಜಿಗೆ--ನೀನು ಇಗೋ, ಈ ಸಕಲ ಚಿಂತೆಯಿಂದ ನಮಗೋಸ್ಕರ ಚಿಂತಿಸಿದಿ; ನಿನಗೆ ಮಾಡಬೇಕಾದ ದ್ದೇನು? ನಿನಗೋಸ್ಕರ ಅರಸನ ಸಂಗಡಲಾದರೂ ಸೈನ್ಯಾಧಿಪತಿಯ ಸಂಗಡಲಾದರೂ ಮಾತನಾಡ ಬೇಕೋ ಎಂದು ಇವಳಿಗೆ ಹೇಳು ಅಂದನು. ಅದಕ್ಕ ವಳು--ನನ್ನ ಸ್ವಜನರ ಮಧ್ಯದಲ್ಲಿ ನಾನು ವಾಸವಾಗಿ ದ್ದೇನೆ ಅಂದಳು.

ನೆಹೆಮ್ಯ 4:3

ಇದಲ್ಲದೆ ಅಮ್ಮೋನ್ಯನಾದ ಟೋಬೀ ಯನು ಅವನ ಬಳಿಯಲ್ಲಿದ್ದು--ಒಂದು ನರಿಯು ಅವರು ಕಟ್ಟಿದರ ಮೇಲೆ ಹಾರಿದರೆ ಅದು ಅವರ ಕಲ್ಲುಗೋಡೆಯನ್ನು ಕೆಡವಿಹಾಕುವದು ಅಂದನು.

ನೆಹೆಮ್ಯ 4:7

ಯೆರೂಸಲೇಮಿನ ಗೋಡೆಗಳು ಕಟ್ಟಲ್ಪ ಟ್ಟವೆಂದೂ ಅದರ ಸಂದುಗಳು ಮುಚ್ಚಲ್ಪಟ್ಟವೆಂದೂ ಸನ್ಬಲ್ಲಟನು ಟೋಬೀಯನೂ ಅರಬಿಯರೂ ಅಮ್ಮೋ ನ್ಯರೂ ಅಷ್ಡೋದ್ಯರೂ ಕೇಳಿದಾಗ ಏನಾಯಿತಂದರೆ

ನೆಹೆಮ್ಯ 13:1

ಅದೇ ದಿವಸದಲ್ಲಿ ಜನರು ಕೇಳುವ ಹಾಗೆ ಮೋಶೆಯ ಪುಸ್ತಕದೊಳಗೆ ಓದುವಾಗ ಅಮ್ಮೋನ್ಯರೂ ಮೋವಾಬ್ಯರೂ ಎಂದಿಗೂ ದೇವರ ಸಭೆಗೆ ಬರಕೂಡದೆಂದು ಅದರಲ್ಲಿ ಬರೆದದ್ದು ಸಿಕ್ಕಿತು.

ಎಸ್ತೇರ್ 6:3

ಆಗ ಅರಸನು--ಇದಕ್ಕೋಸ್ಕರ ಮೊರ್ದೆಕೈಗೆ ಏನಾದರೂ ಘನವೂ ಮಹಿಮೆಯೂ ಮಾಡಲ್ಪಟ್ಟವೋ ಅಂದನು. ಅವನಿಗೆ ಮಾಡಿದ್ದು ಏನೂ ಇಲ್ಲವೆಂದೂ ಅರಸನನ್ನು ಸೇವಿಸುವ ಅವನ ಸೇವಕರು ಹೇಳಿದರು.

ಸಭಾಪ್ರಸಂಗಿ 9:15

ಆಗ ಅದ ರಲ್ಲಿ ಒಬ್ಬ ಜ್ಞಾನಿಯಾದ ಬಡಮನುಷ್ಯನು ಕಾಣಿಸಿ ಕೊಂಡು ಅವನು ತನ್ನ ಜ್ಞಾನದಿಂದ ಆ ಪಟ್ಟಣವನ್ನು ತಪ್ಪಿಸಿದನು. ಆದರೂ ಆ ಬಡಮನುಷ್ಯನನ್ನು ಯಾವನೂ ಜ್ಞಾಪಕಮಾಡಿಕೊಳ್ಳಲಿಲ್ಲ.

Interlinear

Choose Theme