ಅರಸ ನಾದ ದಾವೀದನ ಕ್ಷೇಮ ಸಮಾಚಾರವನ್ನು ವಿಚಾರಿ ಸಲೂ ಹದರೆಜರನ ಸಂಗಡ ಯುದ್ಧ ಮಾಡಿ ಅವನನ್ನು ಹೊಡೆದದ್ದಕ್ಕೋಸ್ಕರ ಅವನನ್ನು ಆಶೀರ್ವದಿಸಲೂ ತೋವನು ತನ್ನ ಕುಮಾರನಾದ ಹದೋರಾಮನನ್ನು ಎಲ್ಲಾ ತರವಾದ ಬೆಳ್ಳಿ ಬಂಗಾರ ತಾಮ್ರದ ಪಾತ್ರೆಗಳು ಸಹಿತವಾಗಿ ಅವನ ಬಳಿಗೆ ಕಳುಹಿಸಿದನು.
Cross references
ಅವನು ದಾವೀದನನ್ನು ವಂದಿಸುವ ದಕ್ಕೂ ಹರಸುವದಕ್ಕೂ ತನ್ನ ಮಗನಾದ ಯೋರಾಮ ನನ್ನು ಕಳುಹಿಸಿದನು; ಯಾಕಂದರೆ ತೋವಿಗೂ ಹದ ದೆಜೆರನಿಗೂ ವಿರೋಧವಾಗಿ ಯುದ್ಧಮಾಡಿದಾಗ ದಾವೀದನು ಅವನನ್ನು ಹೊಡೆದಿದ್ದನು; ಹದದೆಜೆರನಿಗೆ ತೋವು ಸಂಗಡ ಯುದ್ಧಗಳಿದ್ದವು. ಯೋರಾಮನು ಬೆಳ್ಳಿ ಬಂಗಾರ ಹಿತ್ತಾಳೆಯ ಪಾತ್ರೆಗಳನ್ನೂ ತನ್ನೊಂದಿಗೆ ತಂದನು.
ಶೆಬದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿದಾಗ ಒಗಟುಗಳಿಂದ ಅವನನ್ನು ಶೋಧಿಸಲು ಅವಳು ಮಹಾಗುಂಪಿನ ಸಂಗಡ ಸುಗಂಧಗಳನ್ನೂ ಬಹು ಬಂಗಾರವನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಅವನ ಸಂಗಡ ಮಾತಾ ಡಿದಳು.
ದೇವರು ಸೊಲೊಮೋನನ ಹೃದಯದಲ್ಲಿ ಉಂಟುಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯ ಸಮಸ್ತ ಅರಸುಗಳು ಸೊಲೊಮೋನನ ಮುಖದರ್ಶನವನ್ನು ಹುಡುಕಿದರು.
ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕ ಬಲದಾನನೆಂಬವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರಗ ಳನ್ನೂ ಬಹುಮಾನವನ್ನೂ ಕಳುಹಿಸಿದನು.