Home Bibles 1 ದಿನವೃತ್ತಾಂತ 16:11 · ಕನ್ನಡ ಬೈಬಲ್
1 ದಿನವೃತ್ತಾಂತ 16:11 · ಕನ್ನಡ ಬೈಬಲ್

ಕರ್ತನನ್ನೂ ಆತನ ಬಲ ವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾ ಗಲೂ ಹುಡುಕಿರಿ.

Cross references

2 ದಿನವೃತ್ತಾಂತ 6:41

ಈಗ ಓ ದೇವರಾದ ಕರ್ತನೇ, ನೀನು ನಿನ್ನ ಬಲದ ಮಂಜೂಷದ ಸಂಗಡ ನಿನ್ನ ವಿಶ್ರಾಂತಿಗೆ ಏರು; ಓ ದೇವರಾದ ಕರ್ತನೇ, ನಿನ್ನ ಯಾಜಕರು ರಕ್ಷಣೆಯನ್ನು ಧರಿಸಿಕೊಳ್ಳಲಿ; ನಿನ್ನ ಪರಿ ಶುದ್ಧರು ಒಳ್ಳೇದರಲ್ಲಿ ಸಂತೋಷಪಡಲಿ.ಓ ದೇವರಾದ ಕರ್ತನೇ, ನಿನ್ನ ಅಭಿಷಿಕ್ತನಿಗೆ ನಿನ್ನ ಮುಖ ವನ್ನು ತಿರುಗಿಸಬೇಡ; ನಿನ್ನ ಸೇವಕನಾದ ದಾವೀದ ನಿಗೆ ಅನುಗ್ರಹಿಸಿದ ಕೃಪೆಗಳನ್ನು ಜ್ಞಾಪಕಮಾಡು ಎಂದು ಬೇಡಿಕೊಂಡನು.

ಕೀರ್ತನೆಗಳು 4:6

ನಮಗೆ ಒಳ್ಳೇದನ್ನು ಮಾಡುವವರು ಯಾರೆಂದು ಹೇಳುವವರು ಅನೇಕರು. ಕರ್ತನೇ, ನಿನ್ನ ಮುಖದ ಬೆಳಕನ್ನು ನಮ್ಮ ಮೇಲೆ ಪ್ರಕಾಶಗೊಳಿಸು.

ಕೀರ್ತನೆಗಳು 24:6

ಆತನನ್ನು ಹುಡುಕುವ ಸಂತತಿಯು ಇದೇ; ಓ ಯಾಕೋಬ್ಯರ ದೇವರೇ, ನಿನ್ನ ಸನ್ನಿಧಿಯನ್ನು ಹುಡುಕುವವರು ಇಂಥವರೇ. ಸೆಲಾ.

ಕೀರ್ತನೆಗಳು 27:8

ನೀನು--ನನ್ನ ಮುಖವನ್ನು ನೀವು ಹುಡುಕಿರಿ ಎಂದು ಹೇಳಿದಿಯಲ್ಲಾ. ಕರ್ತನೇ, ನಿನ್ನ ಮುಖವನ್ನು ಹುಡು ಕುವೆನು ಎಂದು ನನ್ನ ಹೃದಯವು ನಿನಗೆ ಹೇಳಿತು.

ಕೀರ್ತನೆಗಳು 67:1

ದೇವರು ನಮಗೆ ಕರುಣೆಯುಳ್ಳವನಾಗಿದ್ದು ನಮ್ಮನ್ನು ಆಶೀರ್ವದಿಸಲಿ; ಆತನು ತನ್ನ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ. ಸೆಲಾ.

ಕೀರ್ತನೆಗಳು 68:35

ಓ ದೇವರೇ, ನಿನ್ನ ಪರಿಶುದ್ಧ ಸ್ಥಳಗಳಿಂದ ನೀನು ಭಯಂಕರನಾಗಿದ್ದೀ; ಇಸ್ರಾಯೇಲಿನ ದೇವರಾದ ಈತನೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುತ್ತಾನೆ. ದೇವರಿಗೆ ಸ್ತುತಿಯಾಗಿಲಿ.

ಕೀರ್ತನೆಗಳು 78:61

ತನ್ನ ಬಲ ವನ್ನು ಸೆರೆಗೂ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟನು.

ಕೀರ್ತನೆಗಳು 84:6

ಬಾಕಾ ತಗ್ಗನ್ನು ದಾಟುವಾಗ ಅದನ್ನು ಬುಗ್ಗೆಯಾಗಿ ಮಾಡುತ್ತಾರೆ; ಮಳೆಯು ಕೊಳಗಳನ್ನು ತುಂಬುತ್ತದೆ.

ಆಮೋಸ 5:6

ನೀವು ಕರ್ತನನ್ನು ಹುಡುಕಿ ಬದುಕಿರಿ, ಇಲ್ಲದಿದ್ದರೆ ಆತನು ಬೆಂಕಿಯಂತೆ ಯೋಸೇಫನ ಮನೆತನದಲ್ಲಿ ಪ್ರವೇಶಿಸುವನು; ಅದು ನುಂಗಿಬಿಡುವದು, ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವದಿಲ್ಲ.

ಸೆಫನ್ಯ 2:2

ನಿರ್ಣಯವು ಬರುವದಕ್ಕಿಂತ ಮುಂಚೆ ಯೂ ದಿನವು ಹೊಟ್ಟಿನಂತೆ ಹಾದುಹೋಗುವದಕ್ಕಿಂತ ಮುಂಚೆಯೂ ಕರ್ತನ ಕೋಪದ ದಿನವು ಉರಿದು ನಿಮ್ಮ ಮೇಲೆ ಬರುವದಕ್ಕಿಂತ ಮುಂಚೆಯೂ ಕೂಡಿ ಕೊಳ್ಳಿರಿ.

Interlinear

Choose Theme