ಉಜ್ಜನು ಮಂಜೂಷಕ್ಕೆ ತನ್ನ ಕೈಯನ್ನು ಚಾಚಿದ್ದರಿಂದ ಕರ್ತನ ಕೋಪವು ಅವನ ಮೇಲೆ ಉರಿಯಿತು. ಆತನು ಅವನನ್ನು ಹತಮಾಡಿದನು; ಅವನು ಅಲ್ಲಿಯೇ ದೇವರ ಮುಂದೆ ಸತ್ತನು.
Cross references
ಇದಲ್ಲದೆ ಆರೋನನ ಕುಮಾರರಾದ ನಾದಾಬ್ ಅಬೀಹು ಅವರವರ ಅಗ್ನಿ ಪಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ ಬೆಂಕಿಯನ್ನಿಟ್ಟು ಅದರ ಮೇಲೆ ಸುವಾಸನೆಯ ಧೂಪವನ್ನು ಹಾಕಿ ಕರ್ತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸಿದರು.
ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ.
ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ--ನೀವು ಒಡಂಬಡಿ ಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ; ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿ ಗಳನ್ನು ಕರ್ತನ ಮಂಜೂಷದ ಮುಂದೆ ಹಿಡುಕೊಂಡು ಹೋಗಲಿ ಅಂದನು.
ಆದರೆ ಬೇತ್ಷೆ ಮೆಷಿನ ಜನರು ಕರ್ತನ ಮಂಜೂಷದಲ್ಲಿ ನೋಡಿದ್ದ ರಿಂದ ಕರ್ತನು ಅವರೊಳಗೆ ಐವತ್ತು ಸಾವಿರದ ಎಪ್ಪತ್ತು ಮಂದಿಯನ್ನು ಸಾಯಿಸಿದನು.
ನೀವು ಮೊದಲಿನ ಹಾಗೆ ಮಾಡದೆ ಇದದ್ದರಿಂದ ಕರ್ತನಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದನು. ನ್ಯಾಯದ ಪ್ರಕಾರ ನಾವು ಆತನನ್ನು ಹುಡುಕಲಿಲ್ಲ ಅಂದನು.
ಮೋಶೆಯು ಆಜ್ಞಾಪಿಸಿದ ಕರ್ತನ ವಾಕ್ಯದ ಪ್ರಕಾರ ಲೇವಿಯರ ಮಕ್ಕಳು ಕೋಲುಗಳನ್ನು ಹಾಕಿ ದೇವರ ಮಂಜೂಷ ವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು.
ಆದರೆ ಅವನು ಬಲ ಹೊಂದಿದ ಮೇಲೆ ಅವನ ಹೃದಯವು ನಾಶನಕ್ಕೆ ಎತ್ತಲ್ಪಟ್ಟಿತು. ಏನಂದರೆ, ಅವನು ಧೂಪಪೀಠದ ಮೇಲೆ ಧೂಪ ಸುಡುವದಕ್ಕೆ ಕರ್ತನ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಕರ್ತ ನಿಗೆ ವಿರೋಧವಾಗಿ ಅಪರಾಧ ಮಾಡಿದನು.
ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ; ಅನೇಕರು ನಿದ್ರಿಸುತ್ತಾರೆ.